Friday, February 20, 2009

ಜೀವನ ಸಂಜೆ

ಯಾರ ಜೀವನ ಹೇಗೋ ಏನೋ
ತಿಳಿದುಕೊಳ್ಳಲು ಕಾತರ

ಹೊರಟು ಹೋಗುವ ಮುನ್ನ ಒಮ್ಮೆ
ತಿರುಗಿ ನೋಡಿಕೋ ಒಂದ್ಸಲ
ನೀನು ಮಾಡಿಹ ಕಾರ್ಯ ಕಟ್ಟಳೆ
ತಿಳಿದು ಬರುವುದು ಹಣೆಬರ

ನಿನ್ನ ಜೀವನ ಸಂಜೆ ಹೊತ್ತಲಿ
ಸಮಯ ಸಿಕ್ಕಿದೆ ದುಸ್ತರ
ಮುಳುಗುತಿರುವ ರವಿಯ ಕಂಡು
ಈಗ ಬಂದಿತು ಎಚ್ಚರ

ಮುಗಿದು ಹೋಗಿಹ ಕಥೆಯನೆಂತು
ಮಾಡಬಹುದು ಆರಂಭ
ಮೊದಲೆ ಕೊನೆಯು ತಿಳಿಯುತಿದ್ದರೆ
ಇದ್ದಿಲ್ಲ ಇಂತಹ ಪರಿಸರ

ನನ್ನ ನಿನ್ನಯ ಮಾತು ಇಲ್ಲಿ
ಕಾಲಕ್ಷೇಪದ ಹರಟೆಯು
ಸುಮ್ಮನಿಲ್ಲಿಯೆ ನಿಂತು ನೋಡುತ
ಕಾಲಹರಣ ನಿರಂತರ

ತಿಳಿದೋ ತಿಳಿಯದೆ ಮಾಡಿದಂತಹ
ಪುಣ್ಯ ಕೆಲಸಗಳೆಲ್ಲವೂ
ನಿನ್ನನಿಂದು ತಂದು ನಿಲಿಸಿದೆ
ಪುಣ್ಯಲೋಕದ ದ್ವಾರದಿ

No comments:

Post a Comment