ಹಾಕಿಸಿಕೊಳ್ಳಬೇಕಾದರೆ ವೋಟು
ಜನಗಳಿಗೆಲ್ಲ ಕೊಡುವರು ನೋಟು
ಧರಿಸಿದ ಮೇಲೆ,ಅಧಿಕಾರದ ಕೋಟು
ಸಿಗುವುದು ಜನರಿಗೆ ಬರಿ
ಏಟು
-
ತ್ರಿವೇಣಿಸುತ
ನಸು ಬೆಳಗಾಯ್ತು
ರವಿ ಬಂದಾಯ್ತು
ಆಗಸ ಕೆಂಪಾಯ್ತು
ಕೋಳಿ ಕೂಗಾಯ್ತು||
ಹಕ್ಕಿಗಳೆಲ್ಲ
ಗೂಡನು ತೊರೆದು
ಚಿಲಿಪಿಲಿ ಕಲರವ
ಕಿವಿಯನು ತುಂಬೋಯ್ತು|
ನಿದ್ದೆ ಬಿಟ್ಟಾಯ್ತು
ಎದ್ದು ಬೆಳಗಿನ
ಚಾಕರಿ ಮುಗಿಸಿ
ಕೆಲಸಕೆ ಹೊರಟಾಯ್ತು|
ಕತ್ತಲು ಸರಿದೊಯ್ತು
ನೀರವ ಮೌನ ಮುರಿದಾಯ್ತು
ಅಂಧಕಾರವ ಹರಿದು ಹಾರಿಸಿ
ಸೂರ್ಯನ ರಶ್ಮಿ ಬಂದಾಯ್ತು|
ಬರಲಿ ಬಿರುಸಾಗಿ
ಮಳೆಯು ಹನಿಯಾಗಿ
ತರಲಿ ತಂಪನ್ನು ಭುವಿಗೆ, ಇಳೆಗೆ
ಇದು ಮಳೆಯದೇ ಕಥನ
ಬರಲಿ ಸೊಗಸಾಗಿ
ತಂಪು ತಂಗಾಳಿ
ತರಲಿ ಖುಷಿಯನ್ನು ಜನಕೆ, ಮನಕೆ
ಇದು ಮಳೆಯದೇ ಕಥನ
ಆ ಸೂರ್ಯನ ನೀ ಮಸುಕಾಗಿಸಿ
ಹಗಲನೆ ನೀ ಇರುಳಾಗಿಸಿ
ಈ ಸೊಬಗಲಿ ಮಳೆಯದೇ ನರ್ತನ
ಯಾರ ಜೀವನ ಹೇಗೋ ಏನೋ
ತಿಳಿದುಕೊಳ್ಳಲು ಕಾತರ
ಹೊರಟು ಹೋಗುವ ಮುನ್ನ ಒಮ್ಮೆ
ತಿರುಗಿ ನೋಡಿಕೋ ಒಂದ್ಸಲ
ನೀನು ಮಾಡಿಹ ಕಾರ್ಯ ಕಟ್ಟಳೆ
ತಿಳಿದು ಬರುವುದು ಹಣೆಬರನಿನ್ನ ಜೀವನ ಸಂಜೆ ಹೊತ್ತಲಿ ಸಮಯ ಸಿಕ್ಕಿದೆ ದುಸ್ತರಮುಳುಗುತಿರುವ ರವಿಯ ಕಂಡುಈಗ ಬಂದಿತು ಎಚ್ಚರಮುಗಿದು ಹೋಗಿಹ ಕಥೆಯನೆಂತುಮಾಡಬಹುದು ಆರಂಭಮೊದಲೆ ಕೊನೆಯು ತಿಳಿಯುತಿದ್ದರೆ ಇದ್ದಿಲ್ಲ ಇಂತಹ ಪರಿಸರನನ್ನ ನಿನ್ನಯ ಮಾತು ಇಲ್ಲಿಕಾಲಕ್ಷೇಪದ ಹರಟೆಯು ಸುಮ್ಮನಿಲ್ಲಿಯೆ ನಿಂತು ನೋಡುತಕಾಲಹರಣ ನಿರಂತರತಿಳಿದೋ ತಿಳಿಯದೆ ಮಾಡಿದಂತಹ ಪುಣ್ಯ ಕೆಲಸಗಳೆಲ್ಲವೂ
ನಿನ್ನನಿಂದು ತಂದು ನಿಲಿಸಿದೆಪುಣ್ಯಲೋಕದ ದ್ವಾರದಿ